Tuesday, 4 April 2017

ಶ್ರೀ ರಾಮನವಮಿ ಆಚರಣೆ: ದೇವಾಡಿಗ ಭವನ ನೆರುಲ್ ನಲ್ಲಿ ಸಂಪನ್ನಗೊoಡಿತು.

News & Photos By:  Ganesh Sherighar:-

ಶ್ರೀ ರಾಮನವಮಿ ಆಚರಣೆಯು ಬಹಳ ಶ್ರದ್ಧಾ ಭಕ್ತಿಯ ಮೂಲಕ ಇಂದು ದೇವಾಡಿಗ ಭವನ ನೆರುಲ್ ನಲ್ಲಿ ಸಂಪನ್ನಗೊoಡಿತು.ಬೆಳಿಗ್ಗೆ 8 ಗಂಟೆಗೆ ಗಣಹೋಮವನ್ನು ಶ್ರೀ ಹರಿಶ್ಚಂದ್ರ ದೇವಾಡಿಗ ,ಗೀತ ದೇವಾಡಿಗ ದoಪತಿಗಳು ನೆರೆವೇರಿಸಿದರು.ನಂತರ ನವಿ ಮುoಬೈ ಪ್ರಾದೇಶಿಕ ಸಮಿತಿಯವರು ಭಜನೆ ಆರoಭಿಸಿದರು.ಅವ್ರನ್ನು ಬೊರಿವಿಲಿ,ಸಿಟಿ ,ದೊoಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಭಜನೆ ಮುoದುವರಿಸಿದರು.ಮದ್ಯಾಹ್ನ 12 ಗಂಟೆಗೆ  ದೇವಾಡಿಗ ಸಂಘ ಮುoಬೈಯ ಸುಮಾರು 50 ಲಕ್ಷ ಗುರಿಯ  ವೈದ್ಯಕೀಯ ನಿಧಿ ಉದ್ಘಾಟನೆಯ ಸಭೆ ಸಮಾವೇಷಗೊoಡಿತು.ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಪಾಲ್ ದೇವಾಡಿಗರು, ಪುಣೆಯ ಶ್ರೀ ಅಣ್ಣಯ್ಯ ಶೇರಿಗಾರರು ಆಗಮಿಸಿದ್ದರು.ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ವಹಿಸಿದ್ದರೆ, ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ಎಸ್ ಎಸ್ ರಾವ್ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ,,ಮಾಜಿ ಅಧ್ಯಕ್ಷ ಶ್ರೀ ಎಚ್ ಮೋಹನದಾಸರು,ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗರು, ಜತೆ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಶೇರಿಗಾರ್ ,ಶ್ರೀಮತಿ ಮಾಲತಿ ಮೊಯಿಲಿ.ಮತ್ತು ಸಂಘದ ಜತೆ ಕೋಶಾಧಿಕಾರಿ ಶ್ರೀ ದಯಾನಂದ ದೇವಾಡಿಗರು ,ವೈದ್ಯ ಕೀಯ ಸೆಲ್ ನ ಕಾರ್ಯಾಧ್ಯಕ್ಷರಾದ ಶ್ರೀ ಜನಾರ್ದನ್ ದೇವಾಡಿಗರು ಉಪಸ್ತಿತರಿದ್ದರು.ಶ್ರೀ ಜನಾರ್ದನ್ ದೇವಾಡಿಗರು ಪ್ರಾಸ್ತಾವಿಕ ಭಾಷಣಗೈದರೆ ಮುಖ್ಯ  ಅಥಿತಿಗಳು ಮತ್ತು ಸಂಘದ ಅಧ್ಯಕ್ಷರು,ಶ್ರೀ ವಾಸು ಎಸ್ ದೇವಾಡಿಗರು,ಎಚ್ ಮೋಹನ್ದಾಸರು ಬಡತನ ರೇಖೆಯ ಕೆಳಗಿದ್ದವರಿಗೆ ವೈಧ್ಯಕೀಯ ನೆರೆವಿನ ಮಹತ್ವವನ್ನು ತಿಳಿಸಿದರು. ಸಂಘದ ಅಧ್ಯಕ್ಷ ರವಿ ಎಸ್ ದೇವಾಡಿಗರು,ಶ್ರೀ ಧರ್ಮಪಾಲ್ ದೇವಾಡಿಗರು ,ಶ್ರೀ ಅಣ್ಣಯ್ಯ ಶೇರಿಗಾರರು ಶ್ರೀ ಜನಾರ್ದನ್ ದೇವಾಡಿಗ  ಉಪ್ಪುಂದ  ತಲಾ ಒಂದು ಲಕ್ಷ ರೂಪಾಯಿ ವೈದ್ಯಕೀಯ ದೇಣಿಗೆ ಘೋಷಿಸಿದರೆ,ಶ್ರೀ ಲೋಲಾಕ್ಷ ಅತ್ತಾವರ ಮತ್ತು ಶ್ರೀ ಜಯ ದೇವಾಡಿಗ ಬೊರಿವಿಲಿ ಯವರು ತಲಾ  ರುಪಾಯ್ 25000/- ದೇಣಿಗೆ ಘೋಷಿಸಿದರು.

ಮಧಾಹ್ನ 3 ಗಂಟೆಗೆ ದೇವಾಡಿಗರೇ ಆದ ಚಿಣ್ಮಯ ಮಿಶನ್ ನ ಶ್ರೀ ಶ್ರೀ ದಾಮೋದರ ಚೈತನ್ಯಜಿ ಆಚಾರ್ಯರು ಆಗಮಿಸಿ ಮೌಲ್ಯಯುತವಾದ ಧಾರ್ಮಿಕ ಪ್ರವಚನ ನೀಡಿದರು.ನಂತರ ಶ್ರೀ ಗುಣಪಾಲ ಉಡುಪಿ ಇವರು ಧಾರ್ಮಿಕ ಉಪನ್ಯಾಸ ನೀಡಿದರೆ,ಶ್ರೀ ಗಣೇಶ್ ಶೇರಿಗಾರ್  ಧರ್ಮ ,ಭಕ್ತಿ ,ಪರಿವರ್ತನೆ ಬಗ್ಗೆ ಚುಟುಕಾಗಿ ವ್ಯಾಖ್ಯಾನ ನೀಡಿದರು.ನಂತರ ಶ್ರೀ ಪೂಜಾ ದೇವಾಡಿಗ ಸಕ್ಕ್ಸೋಫೋನ್ ನುಡಿಸಿ  ಮನರಂಜಿಸಿದರೆ ನವಿ ಮುoಬೈ ಪ್ರದೇಶಿಕ ಸಮಿತಿ  ಮತ್ತು ಸಿಟಿ ಸಮಿತಿ ಯ ಕುಮಾರಿ ಧೀಕ್ಷಾ ದೇವಾಡಿಗ ಮತ್ತು ಇತರ ಮಕ್ಕಳು ,ವಸಾಯಿಯ ಶ್ರೀ ನಾಗರಾಜ ದೇವಾಡಿಗರ ಮೂರೂವರೇ ವರ್ಷದ ಪುಟಾಣಿ ತಮ್ಮ ತಮ್ಮ ನ್ರತ್ಯಗಳ ಮೂಲಕ ಮನ ರಂಜಿಸಿದರು. ತದ ನಂತರ ಕುಣಿತ ಭಜನೆಯ ಮೂಲಕ ಭಜನೆಗೈದು ರಾತ್ರಿ 8 ಗಂಟೆಗೆ ಮಂಗಳಾರತಿಯೋಂದಿಗೆ ಪೂಜೆ ಸಮಾಪ್ತಿಗೊoಡಿತು.











































No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...