Sunday, 24 September 2017

ದೇವಾಡಿಗ ಸಂಘ ಮುOಬೈ ಯ ಶ್ರೀ ರಾಮ ಭಜನೆ ಕಾರ್ಯಕ್ರಮ

ದೇವಾಡಿಗ ಸಂಘ ಮುOಬೈ ಯ ಶ್ರೀ ರಾಮ ಭಜನಾ ಮಂಡಳಿಯು ಶ್ರೀ ಸುರೇಶ್ ದೇವಾಡಿಗ ನೆರೂಲ್ ಇವರ ಸಾರಥ್ಯದಲ್ಲಿ ನವರಾತ್ರಿಯ ನಾಲ್ಕನೇ ದಿನವಾದ ಇಂದು ನೆರೂಲ್ ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ಕ್ಷೇತ್ರದಲ್ಲಿ ಇಂದು ಭಕ್ತಿ ಪೂರ್ವಕ ಭಜನೆ ಕಾರ್ಯಕ್ರಮ ನಡೆಸಿ ಕೊಟ್ಟರು. ಶ್ರೀ  ಸುರೇಶ್ ದೇವಾಡಿಗ ನೆರೂಲ್, ಶ್ರೀ ಶಂಕರ ಮೊಯಿಲಿ, ಶ್ರೀ ರಾಘವ ದೇವಾಡಿಗ ಸಿರ್ಸಿ, ಶ್ರೀ ಬಾಬು ದೇವಾಡಿಗ ಬಿಜೂರೂ ಇವರ ಭಜನೆಗಳು ಸೇರಿದ್ದ ಭಕ್ತಾದಿಗಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.ಶ್ರೀ ಎಸ್ ಪಿ ಕರ್ಮರನ್, ಶ್ರೀ ಪ್ರಭಾಕರ ದೇವಾಡಿಗ, ಶ್ರೀ ಗಣೇಶ್ ಶೇರಿಗಾರ್, ಶ್ರೀ ಚಂದ್ರಶೇಕರ ದೇವಾಡಿಗ, ಶ್ರೀ ಭೋಜ ದೇವಾಡಿಗ, ಶ್ರೀ ದಯಾನಂದ್ ದೇವಾಡಿಗ , ಶ್ರೀ ಸುರೇಶ್ ದೇವಾಡಿಗ ಬಾರ್ಕೂರು , ಶ್ರೀಮತಿ ಆಶಾ ದೇವಾಡಿಗ ನೆರೂಲ್,ಶ್ರೀಮತಿ ಶಾಂತಾ ದೇವಾಡಿಗ ನೆರೂಲ್ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೋOಡಿದ್ದರು.

Monday, 11 September 2017

ದೇವಾಡಿಗ ಭವನ ನೆರೂಲ್ ನಲ್ಲಿ ಅಸಲ್ಫ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ವತಿಯಿಂದ ಸOಬ್ರಮದ ಭಜನಾ ಕಾರ್ಯಕ್ರಮ.

ಪ್ರತಿ ತಿಂಗಳ ಎರಡನೆ ಶನಿವಾರ ನೆರೂಲ್ ದೇವಾಡಿಗ ಭವನದ ಭಜನಾ ಮಂದಿರದಲ್ಲಿ  ನಡೆಯುವ ಭಜನಾ ಕಾರ್ಯಕ್ರಮವನ್ನು ಈ ಸಲ   ಅಸಲ್ಫ ಸಾಕಿನಾಕಾ ವಲಯದ ಪ್ರದೇಶಿಕ ಸಮನ್ವಯ ಸಮಿತಿಯು ಭಜನಾ ಪ್ರಾಯೋಜಕತ್ವವನ್ನು ವಹಿಸಿತ್ತು. ಸಾಯಂಕಾಲ 5.30 ಕ್ಕೆ ಪ್ರಾರOಬವಾದ ಭಜನೆಯು 9ಗಂಟೆಯ ವೆರೆಗೆ ನಡೆಯಿತು.ಸಾಕಿನಾಕಾದ ಮಹಿಳಾ ವಿಭಾಗದವರ ಭಜನೆ  ಹಾಗು ಶ್ರೀ ಸುರೇಶ್ ದೇವಾಡಿಗ,ರಾಘವ ದೇವಾಡಿಗ, ಶಂಕರ ಮೊಯಿಲಿ,ಗಣೇಶ್ ಶೇರಿಗಾರ್,ಕದಮ್ ಮತ್ತು ದಯಾನಂದ್ ದೇವಾಡಿಗ,ರಂಜಿನಿ ಮೊಯಿಲಿ,ಆಶಾ ದೇವಾಡಿಗ,ಶೋಭಾ ದೇವಾಡಿಗರ ಭಜನೆಗಳು ನೆರೆದಿದ್ದ ದೇವಾಡಿಗರನ್ನು ಮಂತ್ರ ಮುಗ್ದಗೊಳಿಸಿತು.ಅಸಲ್ಫ ವಲಯದ ಕಾರ್ಯಾಧ್ಯಕ್ಷ ಶ್ರೀ ಅಶೋಕ್ ದೇವಾಡಿಗ,ಶಂಕರ ಮೊಯಿಲಿ,ಉಪ ಕಾರ್ಯಾಧ್ಯಕ್ಷ ಶ್ರೀ ಯೋಗೀಶ್ ದೇವಾಡಿಗ ,ಕಾರ್ಯಾಧ್ಯಕ್ಷೆ ಶ್ರೀಮತಿ ಗೀತ ಬಿ.ದೇವಾಡಿಗ,ಶ್ರೀಮತಿ ಲಲಿತ ಎಸ್ ದೇವಾಡಿಗ,ಶ್ರೀಮತಿ ಭವಾನಿ ಸಿ.ಮೊಯಿಲಿ,ಶ್ರೀಮತಿ ಶೀಲವತಿ ಎನ್ ದೇವಾಡಿಗ, ಶ್ರೀಮತಿ ಸುಜಾತ ಹರೀಶ್ ದೇವಾಡಿಗ ಅಲ್ಲದೆ ನವಿ ಮುOಬೈ ವಲಯ ಕಾರ್ಯಾಧ್ಯಕ್ಷ ಶ್ರೀ ಆನಂದ ಶೇರಿಗಾರ್,ಸುರೇಶ್ ದೇವಾಡಿಗ ಬಾರ್ಕೂರು,ಹರಿಶ್ಚಂದ್ರ ದೇವಾಡಿಗ,ಪಿವಿಎಸ್ ಮೊಯಿಲಿ,ಚಂದ್ರ ಶೇಕರ್ ದೇವಾಡಿಗ,ಶಂಕರ ದೇವಾಡಿಗ ಐರೋಲೀ, ಶ್ರೀ ಭೋಜ ದೇವಾಡಿಗ , ಶ್ರೀಮತಿ ಧನವಂತಿ ದೇವಾಡಿಗ ಮತ್ತು ಶಾOತಾ ದೇವಾಡಿಗರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.ಸಂಘದ ಮಾಜಿ ಅಧ್ಯಕ್ಷ ಶ್ರೀ ಎಸ್ ಪಿ ಕರ್ಮರನ್ ಪೂಜಾ ವಿಧಿಯನ್ನು ಪೂರೈಸಿದರು.




Friday, 1 September 2017

ದೇವಾಡಿಗ ಭವನ ನೆರೂಲ್ ನಲ್ಲಿ ಸOಬ್ರಮದ ಸ್ವಾತಂತ್ರ್ಯೋತ್ಸವ ದಿನಾಚರಣೆ .

ಭ್ರಸ್ಟಾಚಾರ ರಹಿತ ಜೀವನ ನಡೆಸಿ ದೇಶದ ಏಕತೆಗಾಗಿ ಶ್ರಮಿಸಿ --ಶ್ರೀ ರವಿ ಎಸ್ ದೇವಾಡಿಗ

    ನವಿ ಮುOಬೈ ದೇವಾಡಿಗ ಭವನದಲ್ಲಿ ಆಗೋಸ್ಟ್ 15 ರಂದು ಬೆಳಿಗ್ಗೆ 9 ಗಂಟೆಗೆ  ರಾಸ್ಟ್ರದ್ವ ಜವನ್ನು ಅರಳಿಸಿ ನೆರೆದಿದ್ದ ದೇವಾಡಿಗ ಭಾಂಧವರನ್ನು ಉದ್ದೇಶಿಸಿ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಮಾತನಾಡುತ್ತಾ ನಾವು ಭ್ರಸ್ಟಾಚಾರ ರಹಿತ ಜೀವನ ನಡೆಸುವುದರ ಜೊತೆಗೆ ತಮ್ಮ ಮಕ್ಕಳಿಗೂ ಅದೇ ಸಂಸ್ಕಾರದಲ್ಲಿ ಬೆಳೆಸಿ ದೇಶದ ಏಕತೆ ಮತ್ತು ಸೌಹಾರ್ದತೆಗೆ ಶ್ರಮಿಸಬೇಕೆOದು ಕರೆ ನೀಡಿದರು. ಸಂಧರ್ಭದಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀ ವಾಸು ಎಸ್ ದೇವಾಡಿಗ,ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್ ,ಶ್ರೀ ಎಚ್ ಮೋಹನ್ ದಾಸ್ ,ಪ್ರಭಾಕರ ದೇವಾಡಿಗರು ಸಂಧರ್ಭೋಚಿತವಾಗಿ  ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗ,ಜೊತೆ ಕಾರ್ಯದರ್ಶಿ ಶ್ರೀಮತಿ ಮಾಲತಿ  ಮೊಯಿಲಿ, ಖಜಾಂಚಿ ಶ್ರೀ ದಯಾನಂದ ದೇವಾಡಿಗ, ವೈದ್ಯಕೀಯ ಮತ್ತು ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ ದೇವಾಡಿಗ, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮ ಡಿ ದೇವಾಡಿಗ, ಮಹಿಳ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಸುರೇಖ ದೇವಾಡಿಗ ಉಪಸ್ಥಿತರಿದ್ದರು.
    ನಂತರ 10.30 ಗೆ ಸರಿಯಾಗಿ ಸಂಘದ ಅಧ್ಯಕ್ಷ ಶ್ರೀ ರವಿ ಸುಬ್ಬಯ್ಯ ದೇವಾಡಿಗರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆ ನಡೆಯಿತು.ಪ್ರಸಕ್ತ ಸಾಲಿನ ಆರ್ಥಿಕ ಮತ್ತು ಮುOಬರುವ ವರ್ಷದ ಮುOಗಡ ಬಜೆಟ್ ಅನುಮೋದನೆಯನ್ನು ಸಂಘದ ಸದಸ್ಯರಿO ಪಡೆಯಲಾಯಿತು. ಸಂಘದ ಸದಸ್ಯರಾದ ಅಡ್ವೋಕೇಟ್ ಪ್ರಭಾಕರ ದೇವಾಡಿಗ,ರಮೇಶ ದೇವಾಡಿಗ ಐರೋಲೀ, ಶಂಕರ ದೇವಾಡಿಗ ಐರೋಲೀ, ಅಶೋಕ್ ದೇವಾಡಿಗ ಪೋವಾಯಿ , ಪ್ರವೀಣ ನಾರಾಯಣ್ , ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸು ಎಸ್ ದೇವಾಡಿಗ,ಮಾಜಿ ಅಧ್ಯಕ್ಷ ರಾದ ಶ್ರೀ ಎಚ್ ಮೋಹನ್ ದಾಸ್ ,ಶ್ರೀ ಎಸ್ ಕೆ ಶ್ರೀಯಾನ್, ಶ್ರೀ ಎಸ್ ಪಿ ಕರ್ಮರನ್ ಮತ್ತು ವೈದ್ಯಕೀಯ ಹಾಗೂ ಸಾಂಸ್ಕತಿಕ  ವಿಭಾಗದ ಕಾರ್ಯಾಧ್ಯಕ್ಷ ಶ್ರೀ  ಜನಾರ್ಧನ ದೇವಾಡಿಗ ನೆರೂಲ್ ಮೋದಲಾದವರು ಸಂಘದ ಅಭಿವೃದ್ಧಿಗಾಗಿ ಉಪಯುಕ್ತ ಸಲಹೇ ನೀಡಿದರು.




ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...