Friday, 16 February 2018

ದೇವಾಡಿಗ ದೇವಾಡಿಗ ಸಂಘ ಮುಂಬೈ – ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ಅರಸಿನ ಕುಂಕುಮ ಕಾರ್ಯಕ್ರಮ .



ದೇವಾಡಿಗ ಸಂಘ ಮುಂಬೈಯ ಮಹಿಳಾ ವಿಭಾಗದ ವತಿಯಿಂದ  ಅರಸಿನ ಕುಂಕುಮ ಕಾರ್ಯಕ್ರಮವು ಜನವರಿ  26 ರಂದು ಅಪರಾಹ್ನ ದೇವಾಡಿಗ ಭವನ ನೆರೂಲ್ ನಲ್ಲಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಆರ್ ಮೊಯಿಲಿ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜ್ರಂಬಣೆಯಿಂದ ಜರಗಿತು.



ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀಮತಿ ವನಿತಾ ರವಿ ದೇವಾಡಿಗ ಮತ್ತು ಶ್ರೀಮತಿ ಜಯಶ್ರೀ ಡಿ ಅತ್ತಾವರ್.  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ  ಜಯಂತಿ ಆರ್ ಮೊಯಿಲಿ,   ಉಪ ಕಾರ್ಯಾಧ್ಯಕ್ಷೆಯರಾದ ಶ್ರೀಮತಿ ರಂಜನಿ ಆರ್ ಮೊಯಿಲಿ ಮತ್ತು ಶ್ರೀಮತಿ ಸುರೇಖಾ ಎಚ್ ದೇವಾಡಿಗ, ಕಾರ್ಯದರ್ಶಿ ಪೂರ್ಣಿಮಾ ದೇವಾಡಿಗ,  ಜತೆ ಕಾರ್ಯದರ್ಶಿ ಪ್ರಮೀಳಾ ಶೇರಿಗಾರ್  ಉಪಸ್ತಿತರಿದ್ದು ದೀಪ ಬೆಳಗಿಸಿ ಶ್ರೀಮತಿ ಉಮಾ ಶೇರಿಗಾರ್ ಮತ್ತು  ಶ್ರೀಮತಿ ಅಮಿತ ರಾವ್ ಇವರ ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.



ಶ್ರೀಮತಿ ಜಯಂತಿ ಆರ್ ಮೊಯಿಲಿ ಎಲ್ಲರನ್ನೂ ಸ್ವಾಗತಿಸಿ ಅರಸಿನ ಕುಂಕುಮ ಕಾರ್ಯಕ್ರಮ ಹಾಗೂ ಪ್ರಜಾಪ್ರಭುತ್ವ ದಿನದ ಶುಭಕೋರಿದರು. ಮಹಿಳಾ ವಿಭಾಗದ ವರ್ಷಾದ್ಯಂತ ನಡೆದ ಕಾರ್ಯಕ್ರಮಗಳನ್ನು ಹಾಗೂ  ಸಮಾಜದ ಹಿರಿಯ ಮಹಿಳೆಯ ಮನೆಗೆ ಭೇಟಿ ನೀಡಿ  ಅವರನ್ನು ಸತ್ಕರಿಸಿದ ಕಾರ್ಯಕ್ರಮಗಳನ್ನು ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ ವಿವರಿಸಿದರು. ಶ್ರೀಮತಿ ಸುರೇಖಾ ದೇವಾಡಿಗ ಮತ್ತು  ಶ್ರೀಮತಿ ರಂಜಿನಿ ಮೊಯಿಲಿ ಅತಿಥಿಗಳನ್ನು ಪರಿಚಯಿಸಿ ಸತ್ಕರಿಸಿದರು. ಈ ಸಂದರ್ಭದಲ್ಲಿ ಡಾ . ಶ್ವೇತ ದೇವಾಡಿಗ ಇವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರವಿ ಯಸ್ ದೇವಾಡಿಗ ರನ್ನು ಮಹಿಳಾ ವಿಭಾಗದ ಪರವಾಗಿ ಸನ್ಮಾನಿಸಲಾಯಿತು.


 ಕಾರ್ಯಕ್ರಮದ ಅಂಗವಾಗಿ ಮಿಸೆಸ್ ದೇವಾಡಿಗ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಮಾರು 20 ಮಹಿಳೆಯರು ಭಾಗವಹಿಸಿ ಶ್ರೀಮತಿ ರಿಯಾ ಅತ್ತಾವರ್ ಮಿಸೆಸ್ ದೇವಾಡಿಗ ಕಿರೀಟ ವನ್ನು ತನ್ನದಾಗಿಸಿಕೊಂಡರೆ, ಶ್ರೀಮತಿ ಭಾಗ್ಯಶ್ರೀ ದೇವಾಡಿಗ ಮತ್ತು  ಶ್ರೀಮತಿ ವನಿತಾ ಕರ್ಮರನ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ರನ್ನರ್ ಅಪ್ ವಿಜೇತರಾದರು.
ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಸರ್ವಮಹಿಳೆಯರು ಭಾಗವಹಿಸಿ ಪರಸ್ಪರ ಅಭಿನಂದಿಸಿ ಶುಭಕೋರಿದರು. ಕೊನೆಗೆ  ಶ್ರೀಮತಿ ಪ್ರಮೀಳಾ ಶೇರಿಗಾರ್  ಧನ್ಯವಾದವಿತ್ತು ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯ್ತು




Friday, 9 February 2018

ದೇವಾಡಿಗ ಸಂಘ ಮುoಬೈ ಪ್ರಾದೇಶಿಕ ಸಮನ್ವಯ ಸಮಿತಿ ದೊoಬಿವಿಲಿ ವಲಯದ ಮಹಿಳಾ ವಿಭಾಗದ ಅರಶಿನ - ಕುಂಕುಮ ಕಾರ್ಯಕ್ರಮ.



  ಜನವರಿ 28 ರಂದು ದೊoಬಿವಿಲಿ ಪಶ್ಚಿಮದ ಶ್ರೀ ಜಗದo ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳ ಜೊತೆ ಅರಶಿನ - ಕುಂಕುಮ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಶ್ರೀಮತಿ ಲತಾ ಆನಂದ ಶೆಟ್ಟಿ, ಶ್ರೀಮತಿ ಅನುಪಮ ಶೆಟ್ಟಿ , ಶ್ರೀ ಜಗದo ದೇವಸ್ಥಾನದ  ಅರ್ಚಕರ  ಮಾತ್ರಶ್ರೀಯವರಾದ  ಸರಸ್ವತಿ ಭಟ್ ಮತ್ತು ದೊoಬಿವಿಲಿ ವಲಯ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೇ ಶ್ರೀಮತಿ ನಳಿನಿ ಎಸ್ ದೇವಾಡಿಗರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಾಗಿ ಯುವ ವಿಭಾಗದ ಸದಸ್ಯರಾದ ಶ್ರೇಯ ದೇವಾಡಿಗ ಮತ್ತು ಕ್ರತಿಕಾ ದೇವಾಡಿಗ ಪ್ರಾರ್ಥನೆಗೈದರು.ಗಣ್ಯರು  ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀಮತಿ ಮಾಲತಿ  ಮೊಯಿಲಿ ಮಾತನಡುತ್ತಾ ಸಮಿತಿಯ ಒಳ್ಳೆ ಕೆಲಸಗಳ ಬಗ್ಗೆ   ಶ್ಲಾಘನೆ ಮಾಡಿ ಮಹಿಳಾ ವಿಭಾಗದ ಕಾರ್ಯವೈಖರಿ ಅಭಿನಂದನಿಯವಾಗಿದೆ, ಅರಿಶಿನ ಕುಂಕುಮ ಕಾರ್ಯಕ್ರಮ ನಮ್ಮ ಧಾರ್ಮಿಕತೆಯ ಪ್ರತೀಕ ಮತ್ತು ಹಿಂದುತ್ವದ ಸಂಕೇತವಾಗಿದೆ ಎಂದು ನುಡಿದರು. ಶ್ರೀಮತಿ ಅನುಪಮ ಶೆಟ್ಟಿಯವರು ಮಾತನಾಡುತ್ತಾ  ಅರಶಿನ ಕುಂಕುಮ ಮಹಿಳೆಯರ ಶಕ್ತಿಯ ಪ್ರತೀಕವಾಗಿದೆ ಅಲ್ಲದೆ ಸಾಮಾಜಿಕ ಸಂಸ್ಥೆಗಳು ಅರಶಿನ ಕುಂಕುಮದoತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ನಮ್ಮ ಸಂಸ್ಕ್ರತಿ ಉಳಿಸಬೆಳೆಸಬೇಕೆoದು ಆಗ್ರಹಿಸಿದರುಒಬ್ಬ ಮಹಿಳೆ ಒಂದು ಜೀವಿಗೆ ಜನ್ಮ ನೀಡುವ  ಹಕ್ಕನ್ನು ದೇವರು ನೀಡಿದ್ದಾರೆ. ಆದರಿಂದ ಮಹಿಳೆಯರು ತಮ್ಮನ್ನು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊoಡು ಉತ್ತಮ ತಾಯಿಯಾಗಿಅಕ್ಕ ತಂಗಿಯಾಗಿಹೆಂಡತಿಯಾಗಿ, ಅತ್ತಿಗೆಯಾಗಿಗೆಳತಿಯಾಗಿ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಉತ್ತೇಜಕರವಾದ ಮಾತುಗಳನ್ನಾಡಿದರು. ಅತಿಥಿಗಳಲ್ಲಿ ಒಬ್ಬರಾದ ಶ್ರೀಮತಿ ಲತಾ ಆನಂದ ಶೆಟ್ಟಿಯವರು ಅರಶಿನ ಕುಂಕುಮ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ನೆರೆದಿದ್ದ ಮಹಿಳೆಯರಿಗೆ ಶುಭ ನುಡಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಧ್ಯಕ್ಷೇ ಶ್ರೀಮತಿ ನಳಿನಿ ಸುರೇಶ್ ದೇವಾಡಿಗರು ನಮ್ಮ ಮಹಿಳಾ ವಿಭಾಗವು ಒಗ್ಗಟ್ಟಿನಿಂದ ಶ್ರಮಿಸಿದೆ, ಇಂತಹ ಕಾರ್ಯಕ್ರಮಗಳ ಅಗತ್ಯವಿದೆ, ಇದರಿಂದ ಸಂಘಟನೆಗಳು ಬಲಗೊಳ್ಳುತ್ತದೆ. ಸಮಾಜಭಾಂದವರ  ಪ್ರೋತ್ಸಾಹ ಸದಾ ನಮ್ಮ ಜತೆಗಿರಲಿ ಎಂದು ನುಡಿದರು.ದೊoಬಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಹೇಮಾನಂದ ದೇವಾಡಿಗರನ್ನು ಶ್ರೀಮತಿ ನಳಿನಿ ದೇವಾಡಿಗರು ಹೂ ಗುಚ್ಛ ನೀಡಿ ಗೌರವಿಸಿದರು. ಇತರ ಸಂಘ ಸಂಸ್ಥೆಗಳ ಪಧಾದಿಕಾರಿಗಳನ್ನು ಸ್ಥಳೀಯ ಪಧಾದಿಕಾರಿಗಳು  ಹೂಗುಚ್ಛ ನೀಡಿ ಗೌರವಿಸಿದರು. ಇದೇ ಸಂಧರ್ಭದಲ್ಲಿ ಸಾಮಾಜಿಕ ಕ್ಷೇತ್ರ ಹಾಗೂ ಕ್ರೀಡಾವಿಭಾಗದಲ್ಲಿ ಪಾರಿತೋಷಕಗಳನ್ನು ತಮ್ಮದಾಗಿಸಿಕೊಂಡ ಯುವ ವಿಭಾಗದ ಸದಸ್ಯರುಗಳನ್ನು ಗೌರವಿಸಲಾಯಿತು


ವಿವಿಧ ಮನೋರಂಜನ ಕಾರ್ಯಕ್ರಮಗಳು ಪ್ರದರ್ಶನಗೊಂಡವು.ಶ್ರೀಮತಿ ಪುಷ್ಪಲತಾ ಶರತ್ ಕನoತೂರು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವನಾಥ್ ದೇವಾಡಿಗ , ರಾಮಚಂದ್ರ ದೇವಾಡಿಗಸುರೇಶ್ ದೇವಾಡಿಗ , ಉಮೇಶ್ ದೇವಾಡಿಗ  ರಂಜಿನಿ ಮೊಯಿಲಿ , ಸುರೇಖಾ ದೇವಾಡಿಗ, ಶಾಂತ ದೇವಾಡಿಗ , ಪದ್ಮನಾಭ ದೇವಾಡಿಗ , ಅರ್ ಎನ್ ಭಂಡಾರಿ , ದಿವಾಕರ ರೈ, ಆನಂದ್ ಶೆಟ್ಟಿ , ಸುಭಾಶ್ ಶೆಟ್ಟಿ , ಮೋಹನ್ ಸಾಲ್ಯಾನ್ , ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅರಶಿನ ಕುಂಕುಮವನ್ನು ಪರಸ್ಪರ ವಿನಿಮಯ ಮಾಡಿಕೊoಡು ಶುಭ ಹಾರೈಸಿದರುಕಾರ್ಯಕ್ರಮದ ಯಶಸ್ವಿಗೆ ಸಂಘದ ಪಧಾದಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಕೊನೆಯಲ್ಲಿ ವಿಶಾಲ ಹೇಮಾನಂದ ದೇವಾಡಿಗರು ವಂದನಾರ್ಪಣೆಗೈದರು. ಕಾರ್ಯಕ್ರಮವು ಪ್ರೀತಿ ಭೋಜನದೊoದಿಗೆ ಮುಕ್ತಾಯಗೊoಡಿತು.


ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...