Saturday, 18 November 2017

ಮಕ್ಕಳ ವಿಧ್ಯಾಬ್ಯಾಸಕ್ಕೆ ನೆರವು.

ದೇವಾಡಿಗ ಸಂಘ ಮುOಬೈ  ಜತೆ ಕಾರ್ಯದರ್ಶಿ ಶ್ರೀ  ಗಣೇಶ್ ಶೇರಿಗಾರ್ ಮತ್ತು  ಜತೆ ಕೋಶಾಧಿಕಾರಿ ಶ್ರೀ ದಯಾನಂದ್ ದೇವಾಡಿಗ ನೆರೂಲ್ ಇವರ ಮನವಿಯ ಮೇರೆಗೆ ಸೌದಿ ಅರೇಬಿಯಾದ ಚಾರಿಟಿ ಸಂಸ್ಥೆ MASA ( Mangalalore Association of Saudi Arebia ) ದ  Assesment ಮುಖ್ಯಸ್ಥರಾದ ಶ್ರೀ ವಿಧ್ಯಾಧರ ಶೆಟ್ಟಿಯವರು ರೂಪಾಯಿ 20,000/- ದ ಚೆಕ್ ನ್ನು ನಾಲಸೋಪಾರ ನಿವಾಸಿ ಶ್ರೀಮತಿ ಸುಲೋಚನ ಶೇರಿಗಾರ್ ರ ಮಕ್ಕಳ ವಿಧ್ಯಾಭ್ಯಾಸಕ್ಕೆ ಅವರ ಮನೆಗೆ ಸ್ವತಃ ತೆರಳಿ ಶೈಕ್ಷಣಿಕ ನೆರವು ನೀಡಿದರು ಅಲ್ಲದೆ ಮುOದಿನ ವರ್ಷವೂ ಮಕ್ಕಳ ವಿಧ್ಯಾಬ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆ ಇತ್ತರು.

Monday, 13 November 2017

ನವಿ ಮುOಬೈ ಪ್ರಾದೇಶಿಕ ಸಮನ್ವಯ ಸಮಿತಿ ಯುವ ವಿಭಾಗ ದೇವಾಡಿಗ ಸಂಘ ಮುOಬಯಿ ವತಿಯಿಂದ ಒಳಾOಗಣ ಕಬಡ್ಡಿ ಪಂದ್ಯಾಟ ಆಯೋಜನೆ. ಪಂದ್ಯಾಟಗಳ ಮೂಲಕ ಸಮಾಜಭಾಂಧವರೊಳಗಿನ ನವ ಪ್ರತಿಭೆಗಳು ಹೊರ ಹೊಮ್ಮುವOತಾಗಲಿ. --- ಶ್ರೀ ರವಿ ಎಸ್ ದೇವಾಡಿಗ.

ದೇವಾಡಿಗ ಸಂಘ ಮುOಬೈಯ  ನವಿ ಮುOಬೈ ಪ್ರಾದೇಶಿಕ ಸಮನ್ವಯ ಸಮಿತಿ  ಮತ್ತು ಇದರ ಯುವ ವಿಭಾಗದವರು  ನೆರೂಲ್ ದೇವಾಡಿಗ ಭವನದಲ್ಲಿ ನವೆOಬರ್ 12 ರಂದು ದೇಶಿ ಕ್ರೀಡೆಯಾದ ಕಬಡ್ಡಿ ಪಂದ್ಯಾಟವನ್ನು ದೇವಾಡಿಗ ಎಲ್ಲಾ ಪ್ರಾದೇಶಿಕ ಸಮನ್ವಯ ಸಮಿತಿಯ ಯುವ ಕ್ರೀಡಾಳುಗಳಿಗಾಗಿ ಆಯೋಜಿಸಿದ್ದರು. ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು.ಪಂದ್ಯಾಟದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಂಘದ  ಜತೆ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್, ಜತೆ ಖಜಾಂಚಿಗಳಾದ ದಯಾನಂದ್ ದೇವಾಡಿಗ, ಪ್ರಶಾಂತ ಮೊಯಿಲಿ , ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜಯಂತಿ ಮಾದವ ದೇವಾಡಿಗ , ಮಾಜಿ ಅಧ್ಯಕ್ಷರಾದ ಶ್ರೀ ಎಸ್ ಪಿ ಕರ್ಮರನ್, ಸಂಘದ ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ದೇವಾಡಿಗ, ನವಿಮುOಬೈ ಸಮಿತಿಯ ಉಪಕಾರ್ಯಧ್ಯಕ್ಶ ಪ್ರಭಾಕರ ದೇವಾಡಿಗ, ಸಮಿತಿಯ ಜೊತೆ ಕಾರ್ಯದರ್ಶಿಗಳಾದ ಹರಿಶ್ಚಂದ್ರ ದೇವಾಡಿಗ, ಚಂದ್ರಶೇಕರ ದೇವಾಡಿಗ, ಮತ್ತು ಮಾಜಿ ಜೊತೆ ಕಾರ್ಯದರ್ಶಿ ಸುಧಾಕರ ಎಲ್ಲೂರು ಜತೆಗೂಡಿ ನೆರವೇರಿಸಿದರು. ದೇವಾಡಿಗ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಾ ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ, ಇದರಲ್ಲಿ ಭಾಗವಹಿಸುದರ ಮೂಲಕ ಸ್ನೇಹ ಸೌಹಾರ್ದತೆಯನ್ನು ಹೆಚ್ಚಿಸಿಕೊಳ್ಳಬೇಕು ಅಲ್ಲದೆ ಇದರ ಮೂಲಕ ಹೊಸ ದೇವಾಡಿಗ ಪ್ರತಿಭೆಗಳು ಹೊರಹೊಮ್ಮಿ ಜಿಲ್ಲಾ , ರಾಜ್ಯ ಮತ್ತು  ರಾಸ್ಟ್ರದಲ್ಲಿ ಮಿಂಚುವಂತಾಗಲಿ Oದು ಶುಭಹಾರೈಸಿದರು. ತದನಂತರ ಕುಮಾರಿ ತನ್ವಿ ದೇವಾಡಿಗ ಎಲ್ಲಾ ದೇವಾಡಿಗ ಯುವ ಕಬಡ್ಡಿ ಕ್ರೀಡಾಳುಗಳು ಮತ್ತು ಸಮಾಜಭಾಂಧವರನ್ನು ತನ್ನ ಸಿಹಿ ಸಿಹಿ ಮಾತುಗಳಿO ಸ್ವಾಗತಿಸಿದಳು.ಬೆಳಿಗ್ಗೆ 10.30 ಗೆ ಪ್ರಾರಂಬಗೊO  ಪಂದ್ಯಾಟ  ಸಾಯಂಕಾಲ 5 ಗಂಟೆಗೆ ಸಮಾಪ್ತಿಗೊOಡಿತು. ಪಂದ್ಯಾಟದ ಅಂತಿಮ ಸುತ್ತಿನಲ್ಲಿ   ಮೊದಲ ಸ್ಥಾನವನ್ನು ಸಚಿನ್ ದೇವಾಡಿಗರ ನೇತ್ರತ್ವದ ದೊOಬಿವಿಲಿ ಪ್ರಾದೇಶಿಕ ಸಮಿತಿಯ  " ಬಿ  " ತಂಡ ಗೆದ್ದು ಚಾOಪಿಯನ್ ಎನಿಸಿಕೊOಡರೆ ,ದ್ವಿತೀಯ ಸ್ಥಾನವನ್ನು ದೊOಬಿವಿಲಿ ಪ್ರಾದೇಶಿಕ ಸಮಿತಿಯ  "   " ತಂಡ ತನ್ನದಾಗಿಸಿಕೊOಡಿತು. ಬೆಸ್ಟ್ ರೈಡರ್ ಆಗಿ ದೊOಬಿವಿಲಿಯ ಪುನೀತ್ ದೇವಾಡಿಗ ಪುರಸ್ಕ್ರತರಾದರೆ  ,ಬೆಸ್ಟ್ ಡಿಫೆOಡರ್ ಆಗಿ ನವಿ ಮುOಬೈಯ ವಿಜಯ್ ದೇವಾಡಿಗರು ಪುರಸ್ಕ್ರತರಾದರು. ಉದ್ಯಮಿಗಳಾದ ಶ್ರೀ ರಾಘಣ್ಣ ದೇವಾಡಿಗ ಸನ್ಪಾಡ, ಶ್ರೀ ಪದ್ಮನಾಭ ಮೊಯಿಲಿ ಖಾಲಾಪುರ, ದೊOಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ  ಹೇಮಾನO  ದೇವಾಡಿಗ, ಉಪಕಾರ್ಯಧ್ಯಕ್ಶ  ಸುರೇಶ್ ದೇವಾಡಿಗ, ಉಪಕಾರ್ಯಾಧ್ಯಕ್ಷೆ ಶ್ರೀಮತಿ ನಳಿನಿ ದೇವಾಡಿಗ, ಕಾರ್ಯದರ್ಶಿ ಜಯಂತ್ ದೇವಾಡಿಗ, ಭಾಂಡೂಪ್ ನರೇಶ್ ದೇವಾಡಿಗ, ಗಿರೀಶ್ ಕೇಶವ ದೇವಾಡಿಗ, ಜೋಗೇಶ್ವರಿ ಸಮಿತಿಯ ಕಾರ್ಯದರ್ಶಿ ರೋಹಿತ್ ದೇವಾಡಿಗ, ಮೀರಾರೋಡ್ ಸಮಿತಿಯ ಕಾರ್ಯದರ್ಶಿ  ಪ್ರಶಾOತ್ ದೇವಾಡಿಗ, ನವಿಮುOಬೈ ಸಮಿತಿಯ ಖಜಾಂಚಿ ಸುರೇಶ್ ದೇವಾಡಿಗ, ಯುವ ವಿಭಾಗದ ಉಪಕಾರ್ಯಾಧ್ಯಕ್ಷರುಗಳಾದ ಪ್ರಣೀತ್ ದೇವಾಡಿಗ, ಹ಼ರೀಶ್ ದೇವಾಡಿಗ, ಮಾಜಿ ಯುವ ಕಾರ್ಯಾಧ್ಯಕ್ಷ ಧೀಕ್ಶಿತ್ ದೇವಾಡಿಗ, ಐರೋಲಿಯ ರಾಜೇಶ್ ದೇವಾಡಿಗ, ಸಿಟಿ ಸಮಿತಿಯ ಯುವ ಕಾರ್ಯಾಧ್ಯಕ್ಷ ನಿತೇಶ್ ದೇವಾಡಿಗರು   ಉಪಸ್ಥಿತರಿದ್ದರು. ಪಂದ್ಯಾಟದ ಆಯೋಜನೆಗಾಗಿ  ಅತಿ ಮುಖ್ಯವಾಗಿ ಶ್ರಮಿಸಿದ ನವೀ ಮುOಬೈ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ  ಸಚಿನ್ ದೇವಾಡಿಗ ಐರೋಲೀ, ದೇವಾಡಿಗ ಸಂಘ ಯುವ ವಿಭಾಗದ ಉಪಕಾರ್ಯಾಧ್ಯಕ್ಷ  ಪ್ರಣೀತ್ ದೇವಾಡಿಗ ನೆರೂಲ್, ನಿತಿನ್ ದೇವಾಡಿಗ ಸನ್ಪಾಡ ಮತ್ತು ಕೋಪರ್ ಕೈರ್ನೇಯ ಗಿರೀಶ್ ಕೇಶವ ದೇವಾಡಿಗ ಮತ್ತು ನವಿಮುOಬೈ ಯುವ ವಿಭಾಗದವರನ್ನು ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ಶ್ಲಾಘಿಸಿದರು.

:-ಶ್ರೀ ಗಣೇಶ್ ಶೇರಿಗಾರ್









Wednesday, 8 November 2017

ಶ್ರೀ ರವಿ ಸುಬ್ಬಯ್ಯ ದೇವಾಡಿಗ ಅವರನ್ನು ದುಬೈ ಕದಮ್ ನ ದುಬೈ ಸನ್ಮಾನಿಸಿದ ಮಧುರ ಕ್ಷಣ.

ದೇವಾಡಿಗ ಸಂಘ ಮುOಬೈ  ಅಧ್ಯಕ್ಷರು, ಕೊಡುಗೈ ದಾನಿ  ಶ್ರೀ ರವಿ ಸುಬ್ಬಯ್ಯ ದೇವಾಡಿಗ  ಅವರನ್ನು ದುಬೈ ಕದಮ್ ನ ದುಬೈನಲ್ಲಿ ತಾ 27 ರOದು ನಡೆದ ವಾರ್ಶಿಕೋತ್ಸವದಲ್ಲಿ ಗೌರವಾದರಗಳೊOದಿಗೆ ಸನ್ಮಾನಿಸಿದ ಮಧುರ ಕ್ಷಣ..............

ಶ್ರೀ ಹಿರಿಯಡ್ಕ ಮೋಹನ್ ದಾಸ್ ಅವರನ್ನು ಕದಮ್ ನ ದುಬೈನಲ್ಲಿ ಸನ್ಮಾನಿಸಿದ ಮಧುರ ಕ್ಷಣ.

ದೇವಾಡಿಗ ಸಂಘ ಮುOಬೈ ಮಾಜಿ ಅಧ್ಯಕ್ಷರು, ಉತ್ತಮ ಸಂಘಟಕ, ದೇವಾಡಿಗ ಸಮಾಜದ ಸಂಕಟ ಮೋಚಕ ಶ್ರೀ ಹಿರಿಯಡ್ಕ ಮೋಹನ್ ದಾಸ್ ಜೀ ಅವರನ್ನು ದುಬೈ ಕದಮ್ ನ ದುಬೈನಲ್ಲಿ ತಾ 27 ರOದು ನಡೆದ ವಾರ್ಶಿಕೋತ್ಸವದಲ್ಲಿ ಗೌರವಾದರಗಳೊOದಿಗೆ ಸನ್ಮಾನಿಸಿದ ಮಧುರ ಕ್ಷಣ..............

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...