ಜನವರಿ
28 ರಂದು
ದೊoಬಿವಿಲಿ ಪಶ್ಚಿಮದ ಶ್ರೀ ಜಗದoಬ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳ ಜೊತೆ ಅರಶಿನ - ಕುಂಕುಮ ಕಾರ್ಯಕ್ರಮ ಜರುಗಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಘದ ಜತೆ ಕಾರ್ಯದರ್ಶಿ ಶ್ರೀಮತಿ ಮಾಲತಿ ಮೊಯಿಲಿ, ಶ್ರೀಮತಿ ಲತಾ ಆನಂದ ಶೆಟ್ಟಿ, ಶ್ರೀಮತಿ ಅನುಪಮ ಶೆಟ್ಟಿ , ಶ್ರೀ ಜಗದoಬ ದೇವಸ್ಥಾನದ ಅರ್ಚಕರ ಮಾತ್ರಶ್ರೀಯವರಾದ ಸರಸ್ವತಿ ಭಟ್ ಮತ್ತು ದೊoಬಿವಿಲಿ ವಲಯ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೇ ಶ್ರೀಮತಿ ನಳಿನಿ ಎಸ್ ದೇವಾಡಿಗರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಾಗಿ ಯುವ ವಿಭಾಗದ ಸದಸ್ಯರಾದ ಶ್ರೇಯ ದೇವಾಡಿಗ ಮತ್ತು ಕ್ರತಿಕಾ ದೇವಾಡಿಗ ಪ್ರಾರ್ಥನೆಗೈದರು.ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಶ್ರೀಮತಿ ಮಾಲತಿ ಮೊಯಿಲಿ ಮಾತನಡುತ್ತಾ ಸಮಿತಿಯ ಒಳ್ಳೆ ಕೆಲಸಗಳ ಬಗ್ಗೆ ಶ್ಲಾಘನೆ ಮಾಡಿ ಮಹಿಳಾ ವಿಭಾಗದ ಕಾರ್ಯವೈಖರಿ ಅಭಿನಂದನಿಯವಾಗಿದೆ, ಅರಿಶಿನ ಕುಂಕುಮ ಕಾರ್ಯಕ್ರಮ ನಮ್ಮ ಧಾರ್ಮಿಕತೆಯ ಪ್ರತೀಕ ಮತ್ತು ಹಿಂದುತ್ವದ ಸಂಕೇತವಾಗಿದೆ ಎಂದು ನುಡಿದರು. ಶ್ರೀಮತಿ ಅನುಪಮ ಶೆಟ್ಟಿಯವರು ಮಾತನಾಡುತ್ತಾ ಅರಶಿನ ಕುಂಕುಮ ಮಹಿಳೆಯರ ಶಕ್ತಿಯ ಪ್ರತೀಕವಾಗಿದೆ ಅಲ್ಲದೆ ಸಾಮಾಜಿಕ ಸಂಸ್ಥೆಗಳು ಅರಶಿನ ಕುಂಕುಮದoತಹ ಸಾಮಾಜಿಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಿ ನಮ್ಮ ಸಂಸ್ಕ್ರತಿ ಉಳಿಸಬೆಳೆಸಬೇಕೆoದು ಆಗ್ರಹಿಸಿದರು. ಒಬ್ಬ ಮಹಿಳೆ ಒಂದು ಜೀವಿಗೆ ಜನ್ಮ ನೀಡುವ ಹಕ್ಕನ್ನು ಅ ದೇವರು ನೀಡಿದ್ದಾರೆ. ಆದರಿಂದ ಮಹಿಳೆಯರು ತಮ್ಮನ್ನು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊoಡು ಉತ್ತಮ ತಾಯಿಯಾಗಿ, ಅಕ್ಕ ತಂಗಿಯಾಗಿ, ಹೆಂಡತಿಯಾಗಿ, ಅತ್ತಿಗೆಯಾಗಿ , ಗೆಳತಿಯಾಗಿ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಉತ್ತೇಜಕರವಾದ ಮಾತುಗಳನ್ನಾಡಿದರು. ಅತಿಥಿಗಳಲ್ಲಿ ಒಬ್ಬರಾದ ಶ್ರೀಮತಿ ಲತಾ ಆನಂದ ಶೆಟ್ಟಿಯವರು ಅರಶಿನ ಕುಂಕುಮ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ನೆರೆದಿದ್ದ ಮಹಿಳೆಯರಿಗೆ ಶುಭ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಧ್ಯಕ್ಷೇ ಶ್ರೀಮತಿ ನಳಿನಿ ಸುರೇಶ್ ದೇವಾಡಿಗರು ನಮ್ಮ ಮಹಿಳಾ ವಿಭಾಗವು ಒಗ್ಗಟ್ಟಿನಿಂದ ಶ್ರಮಿಸಿದೆ, ಇಂತಹ ಕಾರ್ಯಕ್ರಮಗಳ ಅಗತ್ಯವಿದೆ, ಇದರಿಂದ ಸಂಘಟನೆಗಳು ಬಲಗೊಳ್ಳುತ್ತದೆ. ಸಮಾಜಭಾಂದವರ ಪ್ರೋತ್ಸಾಹ ಸದಾ ನಮ್ಮ ಜತೆಗಿರಲಿ ಎಂದು ನುಡಿದರು.ದೊoಬಿವಿಲಿ ಪ್ರಾದೇಶಿಕ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಹೇಮಾನಂದ ದೇವಾಡಿಗರನ್ನು ಶ್ರೀಮತಿ ನಳಿನಿ ದೇವಾಡಿಗರು ಹೂ ಗುಚ್ಛ ನೀಡಿ ಗೌರವಿಸಿದರು. ಇತರ ಸಂಘ ಸಂಸ್ಥೆಗಳ ಪಧಾದಿಕಾರಿಗಳನ್ನು ಸ್ಥಳೀಯ ಪಧಾದಿಕಾರಿಗಳು ಹೂಗುಚ್ಛ ನೀಡಿ ಗೌರವಿಸಿದರು. ಇದೇ ಸಂಧರ್ಭದಲ್ಲಿ ಸಾಮಾಜಿಕ ಕ್ಷೇತ್ರ ಹಾಗೂ ಕ್ರೀಡಾವಿಭಾಗದಲ್ಲಿ ಪಾರಿತೋಷಕಗಳನ್ನು ತಮ್ಮದಾಗಿಸಿಕೊಂಡ ಯುವ ವಿಭಾಗದ ಸದಸ್ಯರುಗಳನ್ನು ಗೌರವಿಸಲಾಯಿತು.
ವಿವಿಧ ಮನೋರಂಜನ ಕಾರ್ಯಕ್ರಮಗಳು ಪ್ರದರ್ಶನಗೊಂಡವು.ಶ್ರೀಮತಿ ಪುಷ್ಪಲತಾ ಶರತ್ ಕನoತೂರು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶ್ವನಾಥ್ ದೇವಾಡಿಗ , ರಾಮಚಂದ್ರ ದೇವಾಡಿಗ , ಸುರೇಶ್ ದೇವಾಡಿಗ , ಉಮೇಶ್ ದೇವಾಡಿಗ ರಂಜಿನಿ ಮೊಯಿಲಿ , ಸುರೇಖಾ ದೇವಾಡಿಗ, ಶಾಂತ ದೇವಾಡಿಗ , ಪದ್ಮನಾಭ ದೇವಾಡಿಗ , ಅರ್ ಎನ್ ಭಂಡಾರಿ , ದಿವಾಕರ ರೈ, ಆನಂದ್ ಶೆಟ್ಟಿ , ಸುಭಾಶ್ ಶೆಟ್ಟಿ , ಮೋಹನ್ ಸಾಲ್ಯಾನ್ , ರಾಜೇಶ್ ಕೋಟ್ಯಾನ್ ಉಪಸ್ಥಿತರಿದ್ದರು.ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅರಶಿನ ಕುಂಕುಮವನ್ನು ಪರಸ್ಪರ ವಿನಿಮಯ ಮಾಡಿಕೊoಡು ಶುಭ ಹಾರೈಸಿದರು. ಕಾರ್ಯಕ್ರಮದ ಯಶಸ್ವಿಗೆ ಸಂಘದ ಪಧಾದಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಕೊನೆಯಲ್ಲಿ ವಿಶಾಲ ಹೇಮಾನಂದ ದೇವಾಡಿಗರು ವಂದನಾರ್ಪಣೆಗೈದರು. ಕಾರ್ಯಕ್ರಮವು ಪ್ರೀತಿ ಭೋಜನದೊoದಿಗೆ ಮುಕ್ತಾಯಗೊoಡಿತು.



No comments:
Post a Comment