ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು ಅದರ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ 12 ಗಂಟೆಗಳ ಅಖಂಡ ಏಕಾಹ ಭಜನಾ ಕಾರ್ಯಕ್ರಮ ಕುಣಿತದ ಜತೆ ನಡೆಯಲಿದೆ. ಈ ಭಜನಾ ಕಾರ್ಯಕ್ರಮವು ಸಂಘದ ಶ್ರೀ ರಾಮ ಭಜನಾ ಮಂಡಳಿಯ ನೇತ್ರತ್ವದಲ್ಲಿ ಜರುಗಲಿದ್ದು ಸಂಘದ ಎಲ್ಲಾ ಪ್ರಾದೇಶಿಕ ಸಮಿತಿಗಳು ಪ್ರತ್ಯೇಕವಾದ ಭಜನಾ ಸೇವೆಯನ್ನು ನೀಡಲಿದ್ದಾರೆ. ಮಧ್ಯಾಹ್ನ ಅನ್ನ ಪ್ರಸಾದವಿದೆ.
ಕಾರ್ಯಕ್ರಮವು ಮೊದಲಿಗೆ ಶ್ರೀ ಗಣಪತಿ ಪೂಜೆ ಹಾಗು ನವೀ ಮುoಬೈ ಪ್ರಾದೇಶಿಕ ಸಮನ್ವಯ ಸಮಿತಿಯ ಭಜನೆಯೊಂದಿಗೆ ಪ್ರಾರಂಭಗೊಂಡು ಇತರ ಪ್ರಾದೇಶಿಕ ಸಮಿತಿಗಳಾದ ಮೀರಾ ರೋಡ್, ಅಸಲ್ಫ , ಬೊರಿವಿಲಿ , ದೊoಬಿವಿಲಿ , ಜೋಗೇಶ್ವರೀ , ಠಾಣೆ, ಸಿಟಿ ಮತ್ತು ಭಾಂಡುಪ್ ಇವರ ಪ್ರತ್ಯೇಕ ಭಜನಾ ಸೇವೆ ನೀಡಲಿರುವರು. ಅಲ್ಲದೆ ಗೋಕುಲ ಕಲಾವ್ರoದ ಭಜನಾ ಮಂಡಳಿ ಸಯನ್, ಶ್ರೀ ಶನೀಶ್ವರ ಸೇವಾ ಸಮಿತಿ ನೇರುಲ್ , ಶ್ರೀ ಅಯ್ಯಪ್ಪ ಸೇವಾ ಸಮಿತಿ ಐರೋಲಿ, ಹಾಗು ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ಕ್ಷೇತ್ರ ನೇರುಲ್ ಪೂರ್ವ ಅವರಿಂದ ಪ್ರತ್ಯೇಕವಾದ ವಿಶೇಷ ಭಜನೆ ನಡೆಯಲಿದೆ. ಅಲ್ಲದೆ ಈ ಸಂಧರ್ಭದಲ್ಲಿ ಬಾರ್ಕುರಿನಲ್ಲಿ ದೇವಾಡಿಗ ಸಮಾಜದ ಶ್ರೀ ಏಕನಾಥೇಶ್ವರೀ ದೇವಸ್ಥಾನದ ನಿರ್ಮಾಣಕ್ಕೆ ಅಧಿಕ ಮೊತ್ತದ ದೇಣಿಗೆ ನೀಡಿದ ದೇಣಿಗೆದಾರರನ್ನು ಅಭಿನಂದಿಸಲಾಗುವುದು. ಈ ಎಲ್ಲಾ ಕಾರ್ಯಕ್ರಮಕ್ಕೆ ದೇವಾಡಿಗ ಭಾಂಧವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆoದು ಸಂಘದ ಅಧ್ಯಕ್ಷರಾದ ಶ್ರೀ ರವಿ ಎಸ್ ದೇವಾಡಿಗರು, ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ವಿಶ್ವನಾಥ್ ದೇವಾಡಿಗರು ಹಾಗು ಕಾರ್ಯಕ್ರಮದ ಸಂಯೋಜಕರಾದ ಅಡ್ವೋಕೇಟ್ ಶ್ರೀ ಪ್ರಭಾಕರ್ ದೇವಾಡಿಗರು ವಿನಂತಿಸಿದ್ದಾರೆ.
Wednesday, 21 March 2018
ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..
Subscribe to:
Post Comments (Atom)
ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..
ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು ಅದರ ಅಂಗವಾಗಿ ಬೆಳಿಗ್...
-
A Good Social Worker, Ex Chairman of LCC Chembur Ghatkoper Govandi Region , Hotel Udami Shri Ramanna Devadiga Selected as President of Pesth...
-
ಜನವರಿ 28 ರಂದು ದೊ o ಬಿವಿಲಿ ಪಶ್ಚಿಮದ ಶ್ರೀ ಜಗದ o ಬ ದೇವಸ್ಥಾನದ ಒಳಾಂಗಣದಲ್ಲಿ ವಿವಿಧ ಸಾಂಸ್ಕ್ರತಿಕ ಮತ್ತು ಮನೋರಂಜನಾ ಕಾರ್ಯಕ್ರಮಗಳ ಜೊತ...
-
Mumbai Devadigas you r all know our Communities Temple inaugural program scheduled on 15 feb to 22 february 2018. On 19 th feb afternoon 2p...
No comments:
Post a Comment