Sunday, 16 April 2017

ಪ್ರಾದೇಶಿಕ ಸಮಿತಿಗಳ ಸಮಾಲೋಚನ ಸಭೆ ದಾದರ್ ದೇವಾಡಿಗ ಸೆoಟರ್ ನಲ್ಲಿ ನಡೆಯಿತು.

ದೇವಾಡಿಗ ಸಂಘ  ಮುoಬೈ  ಮತ್ತು ಅದರ ಪ್ರಾದೇಶಿಕ ಸಮಿತಿಗಳ ಸಮಾಲೋಚನ ಸಭೆ ಇಂದು ದಾದರ್ ದೇವಾಡಿಗ ಸೆoಟರ್ ನಲ್ಲಿ ನಡೆಯಿತು.ಮಾಜಿ ಅಧ್ಯಕ್ಷರಾದ ಎಚ್ ಮೋಹನದಾಸ್ ಅವರು ಪ್ರಾದೇಶಿಕ ಸಮಿತಿಯ ನಡೆ ಮತ್ತು ಜವಾಬ್ದಾರಿಯ ಬಗ್ಗೆ ವಿವರಣೇ ನೀಡಿದರು.ಸಂಘದ ಅಧ್ಯಕ್ಷ ಶ್ರೀ ರವಿ  ದೇವಾಡಿಗರು ಸಂಘದ ಎಲ್ಲಾ ಸದಸ್ಯರುಗಳ ವಿವರಗಳನ್ನು ಯಾವ ರೀತಿಯಲ್ಲಿ ಕಲೆಹಾಕಬೇಕು ಎoಬುದರ ಬಗ್ಗೆ ಪ್ರಾದೇಶಿಕ ಸಮಿತಿಗಳ ಜವಾಬ್ದಾರಿಗಳ ಬಗ್ಗೆ ತಿಳಿ ಹೇಳಿದರು.ಅಲ್ಲದೆ ವೈದ್ಯಕೀಯ ಫಂಡ್ 25 ಲಕ್ಷಗಳ ಗುರಿ ಹೇಗೆ ತಲುಪಬೇಕೆoಬ  ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.ಇನ್ನು ಶ್ರೀ ಧರ್ಮಪಾಲ್ ದೇವಾಡಿಗರು  ಜಾಗತಿಕ ಒಕ್ಕೂಟ ಮತ್ತು ಜಾಗತಿಕ ಫಂಡ್ ಬಗ್ಗೆ ವಿವರಣೇ ನೀಡಿದರು.ಶ್ರೀ ನರೇಶ್ ದೇವಾಡಿಗ ,ಶ್ರೀ ಜನಾರ್ದನ್ ಉಪ್ಪುಂದ ,ಶ್ರೀ ಪ್ರವೀಣ ನಾರಾಯಣ್ ,ಶ್ರೀ ನವೀನ್ ಉಳ್ಳಾಲ್ ,ಶ್ರೀ ವಾಸು ದೇವಾಡಿಗ,,ಶ್ರೀ ಗೋಪಾಲ್ ಮೊಯಿಲಿ ,ಶ್ರೀ ವಿಶ್ವನಾಥ್ ದೇವಾಡಿಗ ಭಾಂಡುಪ್, ಶ್ರೀ ಅಶೋಕ್ ದೇವಾಡಿಗ ಅಸಲ್ಫ, ಶ್ರೀ ನಾಗರಾಜ್ ದೇವಾಡಿಗ ಮೀರಾರೋಡ್ ಇವರುಗಳು ಸಂಧರ್ಭೋಚಿತವಾಗಿ ಮಾತನಾಡಿದರು.ಈ ಮಧ್ಯೆ ಕಾರ್ಕಳ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿಶಂಕರ ದೇವಾಡಿಗ ಮತ್ತು  ಪದಾದೀಕಾರಿಗಳು ಆಗಮಿಸಿ ಅವರ ಸಂಘದ ಕಾರ್ಯಕ್ರಮದ ಬಗ್ಗೆ ವಿವರಣೇ ನೀಡಿದರು.ಅವರನ್ನು ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ಹೂ ಗುಚ್ಛ ನೀಡಿ ಗೌರವಿಸಿದರು.
                                                                                        ---- : ಶ್ರೀ ಗಣೇಶ್ ಶೇರಿಗಾರ್

No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...