ಭಾರತೀಯ ಜನತಾ ಪಾರ್ಟಿಯ ನವಿ ಮುoಬೈ ಜಿಲ್ಲಾ ಘಟಕವು ಶ್ವಾಸಕೋಶ ಸಮಸ್ಯೇಯಿಂದ ಬಳಲುತ್ತಿರುವ ವಾಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐರೋಲಿ ನಿವಾಸಿ ಅಂಗವಿಕಲ ಪ್ರವೀಣ್ ದೇವಾಡಿಗರ ತಂದೆ ಶ್ರೀ ವಿಟ್ಠಲ ದೇವಾಡಿಗರಿಗೆ ನಿನ್ನೆ ದೇವಾಡಿಗ ಭವನದಲ್ಲಿ ವೈದ್ಯಕೀಯ ನೆರೆವು ನೀಡಿದರು.ಈ ಸಂಧರ್ಭದಲ್ಲಿ ನವಿ ಮುoಬೈ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ,ಗೌರವ ಕಾರ್ಯದರ್ಶಿಗಳಾದ ಶ್ರೀ ರಮೇಶ ಸನಿಲ್,ಶ್ರೀ ಗಣೇಶ್ ಶೇರಿಗಾರ್, ಇತರ ಪದಾಧಿಕಾರಿಗಳಾದ ಶ್ರೀ ಸುಭಾಶ್ ಶೆಟ್ಟಿ ,ಶ್ರೀ ಲೋಕಯ್ಯ ದೇವಾಡಿಗ ,ದಯಾನಂದ್ ದೇವಾಡಿಗ,ಸುರೇಶ್ ದೇವಾಡಿಗ ಉಪಸ್ಥಿತರಿದ್ದರು.ಅಲ್ಲದೆ ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಉಪಸ್ಥಿತರಿದ್ದರು.
---- : ಶ್ರೀ ಗಣೇಶ್ ಶೇರಿಗಾರ್
No comments:
Post a Comment