Wednesday, 16 August 2017

ದೇವಾಡಿಗ ಭವನ ನೆರೂಲ್ ನಲ್ಲಿ ದ್ವಿತೀಯ ಶನಿವಾರದ ಭಜನೋತ್ಸವ ಮತ್ತು ದೇವಾಡಿಗ ಸಂಘ  ಮುOಬೈ ಯ  ನವಿ ಮುOಬೈ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿOದ  ಆಟಿಡೊOಜಿ ದಿನ ( ಆಷಾಡದ  ಒಂದು ದಿನ) ಆಚರಣೆ.

ದೇವಾಡಿಗ ಭವನ ನೇರೂಲ ನಲ್ಲಿ ತಿOಗಳ ದ್ವಿತೀಯ ಮತ್ತು  ಶ್ರಾವಣ ಮೂರನೆಯ ಶನಿವಾರದ ಅಂಗವಾಗಿ ಭಜನಾ ಕಾರ್ಯಕ್ರಮ ಆಗೋಸ್ಟ್ 12 ರOದು  ಅಮಿತೋತ್ಸವದಲ್ಲಿ ಜರುಗಿತು.ಪೂಜೆಯ ಪ್ರಾಯೋಜಕತ್ವವನ್ನು ಸಂಘದ ವೈದ್ಯಕೀಯ ಮತ್ತು ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ ಮತ್ತು ಅವರ ಧರ್ಮಪತ್ನಿ ಅOಬಿಕ ದೇವಾಡಿಗರು( ನವಿ ಮುOಬೈ ಮಹಿಳಾ ಕಾರ್ಯಾಧ್ಯಕ್ಷೆ ) ವಹಿಸಿದ್ದರು. ಸುಮಾರು 100 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ದೇವಾಡಿಗ ಭಂದುಗಳು ಶ್ರೀ ಸುರೇಶ್ ದೇವಾಡಿಗ ನೇರುಲ ,ಶ್ರೀ ವಿಟ್ಟಲ ದೇವಾಡಿಗ ಐರೋಲೀ, ಶಂಕರ ದೇವಾಡಿಗ ಐರೋಲೀ ,ಶ್ರೀ ಶಂಕರ ಮೊಯಿಲಿ ಸಾಕಿನಾಕಾ, ಶ್ರೀ ರಂಜಿನಿ ಮೊಯಿಲಿ,ಶ್ರೀ ಮಾಲತಿ ಮೊಯಿಲಿ, ಶ್ರೀ ಚಂದ್ರಶೇಕರ್ ದೇವಾಡಿಗ ಸನ್ಪಾಡ, ಶ್ರೀ ದಯಾನಂದ್ ದೇವಾಡಿಗ ನೇರುಲ , ಭಾಂಡುಪ್ ನ ರಾಘವ ದೇವಾಡಿಗ ಸಹೋದರರು ಮತ್ತು ಚೆOಬೂರ್ ನ ಶ್ರೀ ಗೋವಿಂದ ದೇವಾಡಿಗ,ಮಹೇಶ ದೇವಾಡಿಗ ಇವ್ರುಗಳ ಭಜನಾಮ್ರತದ ಸವಿಗೈದರು.
ಶ್ರೀ ಎಸ್ ಪಿ ಕರ್ಮರನ್ ಪೂಜಾ ವಿಧಿ ಪೂರೈಸಿದರೆ ಶ್ರೀ  ಪ್ರಭಾಕರ ದೇವಾಡಿಗ ಅಡ್ವಕೇಟ್ ಭಜನಾ ಕಾರ್ಯಕ್ರಮ ಸಂಯೋಜಿದರು.
ನಂತರದ ಆಷಾಡದ ಒಂದು ದಿನದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಗಾಗಿ ಸಂಘದ ಅಧ್ಯಕ್ಷ ಶ್ರೀ ರವಿ   ಎಸ್ ದೇವಾಡಿಗರ ಜೊತೆ ಹಿರಿಯ ದೇವಾಡಿಗ ಮಹಿಳೆಯವರನ್ನು ವೇದಿಕೆಗೆ ಆಹ್ವಾನಿಸಿದ್ದು ಬಹಳ ವಿಶೇಷವೆನಿಸಿತು. ಹಿರಿಯ ದೇವಾಡಿಗ ಮಹಿಳೆಯರಾದ  ಶ್ರೀಮತಿ ನಿರ್ಮಲ ಎಸ್ ದೇವಾಡಿಗ ಖಾರ್ ಗರ್,ಶ್ರೀಮತಿ ಸುಮನ್ ಎನ್ ಖಾರ್ ಗರ್, ಶ್ರೀಮತಿ ಶೋಭದೇವಾಡಿಗ ನೇರುಲ್, ಶ್ರೀಮತಿ ಸುಂದರಿ ಮೊಯ್ಲಿ,ಶ್ರೀಮತಿ ಕಮಲ ದೇವಾಡಿಗ ನೇರುಲ್, ಶ್ರೀಮತಿ   ಸುನಂದ ಕರ್ಮರನ್,ಮತ್ತು ಶ್ರೀಮತಿ ಸ್ವಪ್ನ ಮೊಯ್ಲಿ, ಶ್ರೀಮತಿ ಪೂರ್ಣಿಮಾ ದೇವಾಡಿಗ , ಶ್ರೀಮತಿ ಅOಬಿಕಾ ದೇವಾಡಿಗ,ಶ್ರೀಮತಿ  ಪ್ರಭಾ ದೇವಾಡಿಗ  ,ಶ್ರೀಮತಿ ಕಲಾ ಜಿ ಶೇರಿಗಾರ್, ಶ್ರೀಮತಿ ಸವಿತ  ದೇವಾಡಿಗ, ಶ್ರೀಮತಿ ಶಾOತಾ ದೇವಾಡಿಗ ,ಗೀತಾ ದೇವಾಡಿಗ ನೇರುಲ್ ಇವರುಗಳ ಜೊತೆ ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ದೀಪ ಪ್ರಜ್ವಲನೇ ಮಾಡಿದರು.ಅದರಲ್ಲೂ  ಪ್ರಾರ್ಥನೆಗಾಗಿ ಶ್ರೀ ಗೋವಿಂದ ದೇವಾಡಿಗರ ಯಕ್ಷಗಾನ ಶೈಲಿಯ ಹೊಸ ಪ್ರಾಯೋಗ ನೆರೆದಿದ್ದ ಸಭಿಕರ ಮನಸೆಳೆಯಿತು. ಆಷಾಡದ ಮಾಸದ ಹಿOದಿನ ನಮ್ಮ ಪೂರ್ವಜರುಗಳ ಆಹಾರ ಪದ್ದತಿ,ಜೀವನ ಶೈಲಿಯ ಬಗ್ಗೆ  ಶ್ರೀಮತಿ ಅOಬಿಕಾ ಜೆ ದೇವಾಡಿಗ,ಶ್ರೀಮತಿ ಸುನOದ ಕರ್ಮರನ್,ಶ್ರೀಮತಿ ಮಾಲತಿ ಮೊಯಿಲಿ,ಶ್ರೀಮತಿ ಪ್ರಭಾವತೀ ದೇವಾಡಿಗ,ಶ್ರೀಮತಿ ರಂಜಿನಿ ಮೊಯಿಲಿ, ಮತ್ತು ಶ್ರೀ ಪ್ರಭಾಕರ ದೇವಾಡಿಗ ಉಪಕಾರ್ಯಾಧ್ಯಕ್ಷ ನವಿಮುOಬೈ Lcc ಇವರುಗಳು ಮಾಹಿತಿ ನೀಡಿದರು.ನವಿಮುOಬೈ ಪ್ರಾದೇಶಿಕ ಸೆಮಿತಿಯ ಕಾರ್ಯಾಧ್ಯಕ್ಷ ಶ್ರೀ ಆನಂದ್ ಶೇರಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಾಲಪುರ ರಾಸಾಯನಿ ಉದ್ಯಮಿ ಶ್ರೀ ಪದ್ಮನಾಭ ಮೊಯಿಲಿಯವರು ಮಾತನಾಡುತ್ತಾ ಸ್ಥಳೀಯ ಸಮಿತಿಯ ಮಹಿಳ ವಿಭಾಗದವರು ಆಯೋಜಿಸಿದ್ದ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು  ತಮ್ಮ ಮಕ್ಕಳಿಗೆ ನಮ್ಮ ಕನ್ನಡ ತುಳು ಸಂಸ್ಕ್ರತಿಯ ಬಗ್ಗೆ ಅರಿವು ಮೂಡಿಸಬೇಕೆOದರು,ಅಲ್ಲದೆ ಸುಮಾರು ಮೂವತ್ತಕ್ಕೂ ಹೆಚ್ಚು  ವ್ಯಂಜನಗಳನ್ನು ಮನೆಯಲ್ಲಿಯೇ ತಯಾರಿಸಿ ತಂದ ಮಹಿಳೆಯರ ತತ್ಪರತೆ ಹಾಗೂ ಶ್ರಮವನ್ನು ಪ್ರಶಂಶಿಸಿದರು. ಒಟ್ಟಾರೆಯಾಗಿ ಈ ಕಾರ್ಯಕ್ರಮವು ಸ್ನೇಹ ಸೌಹಾರ್ದತೆ ವ್ರದ್ದೀಸುವ ವೇದಿಕೆಯಾಗಿದ್ದುದು ಆಗಮಿಸಿದ್ದ ಎಲ್ಲರ ಮುಖಾರವಿಂದಗಳಿOದ ತಿಳಿದು ಬರುತಿತ್ತು. ಸOಪೂರ್ಣ ಕಾರ್ಯಕ್ರಮವನ್ನು ಶ್ರೀಮತಿ ಲತಾ ಆನಂದ್ ಶೇರಿಗಾರ್ ಮತ್ತು ಶ್ರೀಮತಿ ಅಶ್ವಿನಿ ಕರಣ್ ದೇವಾಡಿಗರು ನಡೆಸಿಕೊಟ್ಟರು.

No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...